ಕಾಂಗ್ರೆಸ್ ಗೆ ಚಕ್ರವರ್ತಿಯೇ ಟಾರ್ಗೆಟ್ ಏಕೆ ?

ಸೂಲಿಬೆಲೆ ಓರ್ವ ಭಾಷಣಕಾರ ಅಷ್ಟೇ. ಅವರು ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ. ಚಕ್ರವರ್ತಿ ಸೂಲಿಬೆಲೆಯವರೇನು ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಅಂತದ್ರಲ್ಲಿ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಯಾವುದೂ ಅಲ್ಲ. ಅಂದ ಮೇಲೆ ಯಾಕೆ ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆಯವರನ್ನೇ ಟಾರ್ಗೆಟ್ ಮಾಡಿ ಅವರ ತೋಜೋವಧೆಗೆ ಟೊಂಕಕಟ್ಟಿ ನಿಂತಿದೆ ಎಂದು ಕೆದುಕಿ ನೋಡಿದರೆ ತಿಳಿಯುತ್ತೆ ಚಕ್ರವರ್ತಿಯವರು ಕಾಂಗ್ರೆಸ್ ಗೆ ಯಾವ ಮಟ್ಟಿಗೆ ಅಡ್ಡಗಾಲು ಆಗಿದ್ದರು ಎಂದು. ಬಿಜೆಪಿಯಿಂದ ದೂರದಲ್ಲೇ ನಿಂತು 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮುನ್ನವೇ ಕರ್ನಾಟಕದಲ್ಲಿ ಅವರ ಪರ ಪ್ರಚಾರ ಆರಂಭಿಸಿ, ನಮೋ ಬ್ರಿಗೇಡ್‌ನ ಸಾರಥಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದಾದ್ಯಂತ ಸುತ್ತಾಡಿ ಕಾಂಗ್ರೆಸ್ ನ ದುರಾಡಳಿತವನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡುತ್ತ ಕಾಂಗ್ರೆಸ್ ಪರದೆ ಸರಿಸಿ, ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಮಾಡಿದ ಅಭಿವೃದ್ಧಿಯ ಸಾಧನೆಗಳನ್ನು ಸಾರುತ್ತ ನವಭಾರತಕ್ಕೆ ನರೇಂದ್ರ ಮೋದಿ ಏಕೆ ಅವಶ್ಯಕ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುತ್ತ, ನರೇಂದ್ರ ಮೋದಿಯ ಪರ ಗ್ರಾಮ-ಗ್ರಾಮಗಳಲ್ಲಿ ಕೆಲಸಮಾಡಲು ಯುವಕರನ್ನು ಪ್ರೇರೇಪಿಸುತ್ತ ಕರ್ನಾಟಕದಲ್ಲಿ ನರೇಂದ್ರಮೋದಿಯ ಪರ ದೊಡ್ಡ ಅಲೆ ಸೃಷ್ಟಿಸಿದ ವ್ಯಕ್ತಿ ಚಕ್ರವರ್ತಿ ಸೂಲ...