ದೇಶದ ಸುತ್ತ ಇರುವ ಸಮುದ್ರವನ್ನು ಉಪಯೋಗಿಸಿಕೊಂಡು ರಾಜ್ಯಗಳ ಮಧ್ಯೆ ಸರಕು ಸಾಗಾಟ
ಸೂಲಿಬೆಲೆ ಒಂದು ಭಾಷಣದಲ್ಲಿ ಹೇಳುತ್ತಾರೆ, ನಮ್ಮ ದೇಶಕ್ಕೆ ಇರುವ ಅದೃಷ್ಟ ಅಂದರೆ ದೇಶದ ಮೂರು ಕಡೆಯು ಇರುವ ಸಮುದ್ರದ ನೀರು. ರೋಡಿನ ಮುಖಾಂತರ ಹೋದರೆ ಪೆಟ್ರೋಲು ಅದು ಇದು ಅಂತ ವಿಪರೀತ ಖರ್ಚಾಗುತ್ತದೆ. ಅದರ ಬದಲು ಸಮುದ್ರದಲ್ಲಿ ಹಡಗಿನ ಮುಖಾಂತರ ಸಾಮಾನುಗಳನ್ನು ಭಾರತದ ಒಂದು ಬದಿಯಲ್ಲಿರುವ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಿಸುವುದೇ ಅತ್ಯಂತ ಉಳಿತಾಯದ ಮಾರ್ಗ ಎಂದು ಹೇಳಿದ್ದಾರೆ. ಇಲ್ಲೊಬ್ಬರು ಅದರ ಬಗ್ಗೆ ಏನು ಜೋಕ್ ಹಾಡುತ್ತಿದ್ದಾರೆ ನೋಡಿ🙂. ಇವರ ಪ್ರಕಾರ already ಸಮುದ್ರದ ಮೂಲಕ ರಾಜ್ಯಗಳ ಮಧ್ಯೆ ವ್ಯಾಪಾರ ನಡೆಯುತ್ತಿದೆ. ಅದರಲ್ಲಿ ಮೋದಿ ಸರ್ಕಾರ ಮಾಡುತ್ತಿರುವ ವಿಶೇಷ ಏನು, ಸೂಲಿಬೆಲೆ ಸುಳ್ಳು ಹೇಳುತ್ತಿದ್ದಾರೆ ಅಂತ ಇವರ ಪ್ರಶ್ನೆ!
ಈ ಮಹಾಶಯನಿಗೆ ಗೊತ್ತಿಲ್ಲ: ಸೂಲಿಬೆಲೆ ಹೇಳುತ್ತಿರುವುದು ದೇಶದೊಳಗಿನ ರಾಜ್ಯಗಳ ಮಧ್ಯೆ ಸಮುದ್ರದ ಮೂಲಕ ಸರಕು ಸಾಗಿಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಪ್ರೊಜೆಕ್ಟ್ "ಸಾಗರಮಾಲಾ" ಎಂಬುದರ ಬಗ್ಗೆ. ಉದಾಹರಣೆಗೆ ತಮಿಳುನಾಡಿನಿಂದ ಆಂಧ್ರರಪ್ರದೇಶಕ್ಕೆ ಸಾಗಿಸುವ ವಸ್ತುಗಳನ್ನು ಆರಾಮವಾಗಿ ಸಮುದ್ರ ಮುಖಾಂತರವೇ ಸಾಗಿಸಬಹುದು. ಏಕೆಂದರೆ ಎರಡು ರಾಜ್ಯಗಳು ಪೂರ್ವದಿಕ್ಕಿನಲ್ಲಿಿ ಬರುತ್ತವೆ, ಎರಡುುು ರಾಜ್ಯಗಳ ಪೂರ್ವಭಾಗದಲ್ಲಿ ಸಮುದ್ರವಿದೆ.