ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚನೆ! ಮಾಡಿದ ಮೋದಿ!
ಮೋದಿ 2014ರಲ್ಲೀ ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸ ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚನೆ! ಇದು ಮೋದಿಯವರ ಬದ್ಧತೆಯನ್ನು ತೋರಿಸುತ್ತದೆ! ಸುದ್ದಿ ಲಿಂಕ್ ಕಪ್ಪುಹಣ ನಿಯಂತ್ರಣಕ್ಕೆ ಮೋದಿ ಸರಕಾರ ಕೈಗೊಂಡ ಕ್ರಮಗಳು vijaykarnataka.com | November 9, 2016 04:00 AM 1. ಸುಪ್ರೀಂ ಉಸ್ತುವಾರಿಯ ಎಸ್‌ಐಟಿ ರಚನೆ ಮೋದಿ ಸರಕಾರ ಕಪ್ಪು ಹಣ ನಿಯಂತ್ರಣಕ್ಕೆ ಕೈಗೊಂಡ ಮೊದಲ ಕ್ರಮವೆಂದರೆ, ಅದು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ಕಪ್ಪುಹಣ ತನಿಖೆಗಾಗಿ ವಿಶೇಷ ತನಿಖಾ ಸಮಿತಿ (ಎಸ್‌ಐಟಿ) ರಚನೆ. ಮೋದಿ ಸರಕಾರದ ಮೊಟ್ಟ ಮೊದಲ ಸಭೆಯಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. 2. ತೆರಿಗೆ ಒಪ್ಪಂದಗಳ ಮರುಸಂಧಾನ ತೆರಿಗೆ ಸ್ವರ್ಗ ಎಂದೇ ಖ್ಯಾತಿ ಪಡೆದ ಮಾರಿಷಸ್, ಸ್ವಿಟ್ಜರ್‌ಲೆಂಡ್‌ನಂತಹ ದೇಶಗಳೊಂದಿಗೆ ತೆರಿಗೆ ಒಪ್ಪಂದಗಳನ್ನು ಮರುಸಂಧಾನ ಮಾಡಿಕೊಂಡದ್ದು ಮತ್ತು ಈ ದೇಶಗಳೊಂದಿಗೆ ‘ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದ’ಗಳನ್ನು ಮಾಡಿಕೊಂಡದ್ದು. ಮಾರಿಷಸ್ ಜತೆಗೆ ‘ದ್ವಂದ್ವ ತೆರಿಗೆ ತಪ್ಪಿಸುವ ಒಪ್ಪಂದ’ವನ್ನು (ಡಿಡಿಎಎ) ಮರುಸಂಧಾನ ಮಾಡಿಕೊಂಡ ಮೋದಿ ಸರಕಾರ, ಭಾರತದಲ್ಲಿರುವ ಅಂತಹ ಆಸ್ತಿಗಳ ಮೇಲೆ ಬಂಡವಾಳ ತೆರಿಗೆ ವಿಧಿಸಲು ಆರಂಭಿಸಿತು. ಇತರ ‘ತೆರಿಗೆ ಸ್ವರ್ಗ’ ದೇಶಗಳ...