ಎಲ್ಲಾ ಓಕೆ. ಇವರೇಕೆ ಚಕ್ರವರ್ತಿ ಹಿಂದೆ ಏಕೆ ಬಿದ್ದಿದ್ದಾರೆ ?

 

ಎಲ್ಲಾ ಓಕೆ. ಇವರೇಕೆ ಚಕ್ರವರ್ತಿ ಹಿಂದೆ ಏಕೆ ಬಿದ್ದಿದ್ದಾರೆ ?

KGF ಸಿನೆಮಾದಲ್ಲಿ ಒಂದು interesting ಶಬ್ದ ಇದೆ. ಬ್ರಾಂಡಿಂಗ್ ಅಂತ. ಅದನ್ನ  ಹೀರೋ ಯಶ್ ಒಂದು ಕಡೆ  ಹೇಳುತ್ತಾರೆ.  "Rocky since 1951" ಅಂತ. ಅಂದರೆ,  Rocky ಅನ್ನೋದು ಬರೀ ನನ್ನ ನೇಮ್ ಅಲ್ಲ ಅದು ಬ್ರಾಂಡ್, ಅಂತ. ಹಾಂಗೆ ಇತ್ತೀಚೆಗೆ ಕೆಲವರು  'ಇಂಜಿನಿಯರಿಂಗ್ ಪದವೀಧರ ಹಾಗೂ ಭಾಷಣಕಾರ' ಸೂಲಿಬೆಲೆ ಅವರನ್ನು #ಹೇಂಗ್_ಪುಂಗ್_ಲೀ  ಅಂತ  ಬ್ರಾಂಡ್ ಮಾಡೋದಕ್ಕೆ ಬೇಜಾನ್ ಪ್ರಯತ್ನ ಪಡ್ತಾ ಇದ್ದಾರೆ.  🙂

ಏಕೆ ? ಏಕೆ ಇವರೆಲ್ಲ ಚಕ್ರವರ್ತಿ ಹಿಂದೆ ಸೀಳುನಾಯಿಗಳಂತೆ ಬಿದ್ದಿದ್ದಾರೆ? ಏಕೆಂದರೆ #ಚಕ್ರವರ್ತಿ_ಸೂಲಿಬೆಲೆ  ಕರ್ನಾಟಕದ ಯುವಕರ ಒಗ್ಗೂಡಿಸುವ ಒಂದು powerful uniting force

ನೂರಾರು ವರ್ಷಗಳಿಂದ ಮುಳುಗಿಹೋಗಿರುವ ದೇವಸ್ಥಾನದ ಪುಷ್ಕರಣಿಯನ್ನು ಪಾತಾಳದಿಂದ ಮೇಲೆತ್ತುವ ಬಲಿಷ್ಠ ಯುವ ಸಮುದಾಯ ಸದ್ದೇ ಇಲ್ಲದೆ ಅವರ ಹಿಂದೆ ಇದೆ. ಅವರ ಮೇಲೆ ಪ್ರೀತಿ ತೋರಿಸುವ ಒಂದು ದೊಡ್ಡ  ಸಮೂಹವೇ ಕರ್ನಾಟಕದಲ್ಲಿ ಇದೆ.  ಅದೇ ಅವರ ಮೇಲಿನ ಉರಿಗೆ ಕಾರಣವಾಗಿರುವುದು 🙂. 

ಹಳ್ಳಿಯ ಪಂಚಾಯಿತಿ ಕಟ್ಟೆ ಮೇಲೆ ಕೂತ ನಿರುದ್ಯೋಗಿಗಳಂತೆ "ಹಂಗೆ ಕಣ್ಲಾ, ಹಿಂಗೆ ಕಣ್ಲಾ,  ಬೇಜಾನ್  ಪುಂಗುತಾನಂತೆ ಕಣ್ಲಾ" ಅಂತ, ಯಾವನೋ ಜಿಹಾದಿ_ಅಕೌಂಟ್ ನವನು ಕಳಿಸಿದ ವಾಟ್ಸಪ್-ಫಾರ್ವರ್ಡ್ ನೋಡುತ್ತಾ, ಮುಸಿ ಮುಸಿ ನಗುತ್ತಾ ಅದೇ ಅದೇ  ಸುಳ್ಳನ್ನು ಮುಂದಕ್ಕೆ ತಳ್ಳುತ್ತಾ ಟೈಂಪಾಸ್ ಮಾಡುತ್ತಿದ್ದಾರೆ. ಒಬ್ಬನಾದರೂ ಇದು ಸತ್ಯವಾ ಸುಳ್ಳ ಎಂದು ಪರಿಶೀಲಿಸಿ ನೋಡಿದ್ದಾನ? ಇಲ್ಲ! 

'ಕೌಟುಂಬಿಕ ಪಾರ್ಟಿಗಳ ಕಮಿಷನ್ ಚೇಲಾಗಳ' ಅಸಲಿ ಟಾರ್ಗೆಟ್: ಚಕ್ರವರ್ತಿ_ಸೂಲಿಬೆಲೆ ಅಲ್ಲ, ಅವರ ಹಿಂದೆ ಇರುವ ಈ ವಿದ್ಯಾವಂತ ರಾಷ್ಟ್ರಭಕ್ತ ಯುವ ಸಮುದಾಯ.  ಉದ್ದೇಶ ಇಷ್ಟೇ: ಎಲ್ಲರಿಗೂ ಅರ್ಥವಾಗುವ, ಹರಿತವಾದ ರಾಷ್ಟ್ರೀಯತೆ ಭಾಷಣ ಮಾಡುವ   #ಸೂಲಿಬೆಲೆ ಅವರನ್ನು 2024 ಚುನಾವಣೆ ಬರುವ ಹೊತ್ತಿಗೆ ಕರ್ನಾಟಕದಲ್ಲಿ ಹಣಿಯುವ ಪಿತೂರಿ. ಅವರ ರಾಷ್ಟ್ರಭಕ್ತಿಯೇ ಅವರಿಗೆ ಮಾರಕವಾಗಿದೆ.

ಸೂಲಿಬೆಲೆಗೆ ಈ ಅಪರೂಪದ ವಿಷಯಗಳು ಹೇಗೆ ಗೊತ್ತಾಗುತ್ತವೆ ?

ಈ  ಮೂರ್ಖರು ಯಾಕೆ ಕೈತೊಳೆದುಕೊಂಡು ಸೂಲಿಬೆಲೆ  ಹಿಂದೆ ಬಿದ್ದಿದ್ದಾರೆ ಎಂದರೆ, ಸೂಲಿಬೆಲೆ ಹೇಳುವ ಎಷ್ಟೋ ಸುದ್ದಿಗಳು ಇವರು ನೋಡುವ:  ರಂಗನಾಥ_ಪಬ್ಲಿಕ್_ಟಿವಿಯಲ್ಲಿ ಬರುವುದಿಲ್ಲ!  #ಸೂಲಿಬೆಲೆ  ಕೊಡುವ ಮಾಹಿತಿಗಳು ರಾಧ_ ಹಿರಿದಾದ_ಗೌಡರ_ಬಿಟಿವಿಯಲ್ಲಿ ಬರುವುದಿಲ್ಲ.

1. ಏಕೆಂದರೆ ಪ್ರಧಾನಮಂತ್ರಿ ಮೋದಿ, ಅವರ ಕೇಂದ್ರ ಸರ್ಕಾರದ ಪ್ರತಿಯೊಬ್ಬ ಮಂತ್ರಿಗಳು, ಅಧಿಕಾರಿಗಳು ಹಾಗೂ ಬಿಜೆಪಿ ಒಳಗೆ ಇರುವ ಎಷ್ಟೋ ಬಾತ್ಮೀದಾರರು ಟ್ವಿಟರ್_ನಲ್ಲಿ ಇದ್ದಾರೆ. ದಿಲ್ಲಿ ವಲಯದ ಇಂಗ್ಲಿಷ್ ಮಾಧ್ಯಮಗಳು, ಮತ್ತವರ ವರದಿಗಾರರು ಎಷ್ಟೋ ಆಸಕ್ತಿಕರ ಅಪರೂಪದ ಮಾಹಿತಿಗಳನ್ನು ಟ್ವಿಟರ್_ನಲ್ಲಿ ದಿನನಿತ್ಯವೂ ಹಂಚಿಕೊಳ್ಳುತ್ತಾರೆ. ಅದೆಲ್ಲ ಇಂಗ್ಲಿಷ್ನಲ್ಲಿ, ಹಿಂದಿಯಲ್ಲಿ ಇರುತ್ತದೆ. ಸೂಲಿಬೆಲೆ ನಿರಂತರವಾಗಿ ಟ್ವಿಟರ್_ನಲ್ಲಿ ಅದನ್ನೆಲ್ಲಾ ಫಾಲೋ ಮಾಡುತ್ತಾ ಇರುತ್ತಾರೆ! ಏಕೆಂದರೆ ನಾನೂ ಕೂಡ ಟ್ವಿಟರ್_ನಲ್ಲೆ  ಎಷ್ಟೋ ವಿಷಯಗಳನ್ನು ತಿಳಿದುಕೊಂಡಿರುವುದು.

2. ಎಷ್ಟೋ ಬಾರಿ ಈ ಮಾಹಿತಿಗಳು ಪ್ರಮುಖ ಸುದ್ದಿ ಮಾಧ್ಯಮದಲ್ಲೀ ಸುದ್ದಿಯಾಗುವುದೇ ಇಲ್ಲ! ಮೋದಿ ಬಗ್ಗೆ ಒಳ್ಳೆ ವಿಷಯಗಳನ್ನು, ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಸುತಾರಾಂ ಪ್ರಕಟಿಸುವಂತಿಲ್ಲ ಎಂದು #ನಕಲಿ_ಗಾಂಧಿಗಳ_ಪಕ್ಷ ಅವರ ಬಾಯಿಗೆ ಕಡುಬು ತುರುಕಿದೆ. ಇನ್ನ  ಪಬ್ಲಿಕ್ ಟಿವಿಗೆ, ಬಿಟಿವಿ ಅವರ ಬಾಯಿಗೆ ಬರಲು ಹೇಗೆ ಸಾಧ್ಯ? 🙂 ಅದಕ್ಕೆ ಸುಮಾರು ವರ್ಷಗಳವರೆಗೆ ಸುದ್ದಿ ಮಾಧ್ಯಮಗಳಿಗೆ ಸುದ್ದಿ ಮಾರಿಕೊಳ್ಳುವ presstitute ಎಂದೇ ಜನ ಹೆಸರಿಟ್ಟಿದ್ದರು.

3. ಸೂಲಿಬೆಲೆಯವರ ಟ್ರೋಲ್ ಮಾಡಲು ಪ್ರಯತ್ನಿಸುತ್ತಿರುವ ಎಷ್ಟೋ "ಐದನೇ ಕ್ಲಾಸ್ ಫೇಲ್  ಬಾವಿ ಕಪ್ಪೆಗಳು" ಟ್ವಿಟರ್ ಮುಖವನ್ನೇ ನೋಡಿಲ್ಲ. ಅದಕ್ಕೆ ಈ ದಡ್ ಪ್ರಾಣಿಗಳಿಗೆಲ್ಲ, ಸೂಲಿಬೆಲೆಗೆ ಈ ಮಾಹಿತಿ ಎಲ್ಲಿಂದ ಬರುತ್ತದೆ ಎಂದು ಅದೇ ಆಶ್ಚರ್ಯ! ಮೋದಿ ಅವರ ಸಾಧನೆಗಳನ್ನು, ಅವರ ವಿಷನ್ ಗಳನ್ನು ಸೂಲಿಬೆಲೆ ಕನ್ನಡದ ಅಭಿಮಾನಿಗಳಿಗೆ ತಮ್ಮದೇ ಸರಳವಾದ ಭಾಷೆಯಲ್ಲಿ ತಿಳಿಸುತ್ತಿದ್ದಾರೆ. ಇದೇ ಕೌಟುಂಬಿಕ ಪಾರ್ಟಿಯ ಚೇಲಾಗಳಿಗೆ  ಕೆಳಗೆ ಮೆಣಸಿನಕಾಯಿ ತುರುಕಿದಂತೆ ಆಗಿರುವುದು ! 

ಈಗ ಗೊತ್ತಾಯ್ತು ತಾನೆ ಜನ ಏಕೆ ಸೂಲಿಬೆಲೆ ಕಂಡರೆ ಏಕೆ ತೊಡೆ ಮಧ್ಯ ಒದ್ದೆ ಮಾಡಿಕೊಳ್ಳುತ್ತಿದ್ದಾರೆ ಎಂದು? 🙂. ಏಕೆಂದರೆ ಸೂಲಿಬೆಲೆಯವರ ವಿರೋಧಿಗಳು ಇವಾಗಲೇ 2024ರ ಲೋಕಸಭಾ ಚುನಾವಣೆಗೆ ರೆಡಿಯಾಗುತ್ತಿದ್ದಾರೆ.


ಸೂಲಿಬೆಲೆ ಓರ್ವ ಭಾಷಣಕಾರ ಅಷ್ಟೇ. ಅವರು ಯಾವ ಚುನಾವಣೆಗೂ ನಿಂತಿಲ್ಲ, ಯಾವ ಸರ್ಕಾರಿ ಅಧಿಕಾರಿಯೂ ಅಲ್ಲ.
 ಚಕ್ರವರ್ತಿ ಸೂಲಿಬೆಲೆಯವರೇನು ಮಂತ್ರಿಯೋ, ಮುಖ್ಯಮಂತ್ರಿಯೋ ಅಥವಾ ಆಡಳಿತ ಪಕ್ಷದ ವ್ಯಕ್ತಿಯೋ!? ಅಂತದ್ರಲ್ಲಿ ಭಾಷಣಕಾರನೊಬ್ಬನ ಮೇಲೇಕೆ ಇಷ್ಟೊಂದು ದ್ವೇಷ ! ಯಾವುದೂ ಅಲ್ಲ. ಅಂದ ಮೇಲೆ ಯಾಕೆ ಕಾಂಗ್ರೆಸ್ ಚಕ್ರವರ್ತಿ ಸೂಲಿಬೆಲೆಯವರನ್ನೇ ಟಾರ್ಗೆಟ್ ಮಾಡಿ ಅವರ ತೋಜೋವಧೆಗೆ ಟೊಂಕಕಟ್ಟಿ ನಿಂತಿದೆ ಎಂದು ಕೆದುಕಿ ನೋಡಿದರೆ ತಿಳಿಯುತ್ತೆ ಚಕ್ರವರ್ತಿಯವರು ಕಾಂಗ್ರೆಸ್ ಗೆ ಯಾವ ಮಟ್ಟಿಗೆ ಅಡ್ಡಗಾಲು ಆಗಿದ್ದರು ಎಂದು.

ಬಿಜೆಪಿಯಿಂದ ದೂರದಲ್ಲೇ ನಿಂತು 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮುನ್ನವೇ ಕರ್ನಾಟಕದಲ್ಲಿ ಅವರ ಪರ ಪ್ರಚಾರ ಆರಂಭಿಸಿ, ನಮೋ ಬ್ರಿಗೇಡ್‌ನ ಸಾರಥಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದಾದ್ಯಂತ ಸುತ್ತಾಡಿ ಕಾಂಗ್ರೆಸ್ ನ ದುರಾಡಳಿತವನ್ನು ಎಳೆ ಎಳೆಯಾಗಿ ಜನತೆಯ ಮುಂದೆ ಬಿಚ್ಚಿಡುತ್ತ ಕಾಂಗ್ರೆಸ್ ಪರದೆ ಸರಿಸಿ, ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಮಾಡಿದ ಅಭಿವೃದ್ಧಿಯ ಸಾಧನೆಗಳನ್ನು ಸಾರುತ್ತ ನವಭಾರತಕ್ಕೆ ನರೇಂದ್ರ ಮೋದಿ ಏಕೆ ಅವಶ್ಯಕ ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುತ್ತ, ನರೇಂದ್ರ ಮೋದಿಯ ಪರ ಗ್ರಾಮ-ಗ್ರಾಮಗಳಲ್ಲಿ ಕೆಲಸಮಾಡಲು ಯುವಕರನ್ನು ಪ್ರೇರೇಪಿಸುತ್ತ ಕರ್ನಾಟಕದಲ್ಲಿ ನರೇಂದ್ರಮೋದಿಯ ಪರ ದೊಡ್ಡ ಅಲೆ ಸೃಷ್ಟಿಸಿದ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ. ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಲು ತನ್ನದೇ ಕಾಣಿಕೆಯನ್ನು ಸಲ್ಲಿಸಿದ ಚಕ್ರವರ್ತಿ ಸೂಲಿಬೆಲೆ ನರೇಂದ್ರ ಮೋದಿಜೀ ಪ್ರಧಾನಿ ಗದ್ದುಗೆ ಏರುತ್ತಿದಂತೆ ನಮೋ ಬ್ರಿಗೇಡ್ ಸಂಘಟನೆಯನ್ನು ಸಮಾಪ್ತಿ ಮಾಡಿ, ರಾಷ್ಟ್ರೀಯ ಚಿಂತನೆಯ ಯುವಕರನ್ನೆಲ್ಲ ಒಟ್ಟು ಮಾಡಿಕೊಂಡು ಯುವಾ‌ ಬ್ರಿಗೇಡ್ ಸಂಘಟನೆ ಕಟ್ಟಿಕೊಂಡು ನದಿ, ಕೆರೆ, ಕಲ್ಯಾಣಿಗಳ ಸ್ವಚ್ಚತೆ ಮಾಡುತ್ತ, ನೆಲ‌ ಜಲದ ಕಾಯಕದಲ್ಲಿ ತೊಡಗಿಸಿಕೊಂಡರು. 2016 ರಲ್ಲಿ ನರೇಂದ್ರ ಮೋದಿ ರಾಷ್ಟ್ರೀಯ ಹಿತಾಸಕ್ತಿಗಾಗಿ 500 ಹಾಗೂ 1000 ಮುಖ ಬೆಲೆಯ ನೋಟು ಅಮಾನ್ಯ ಮಾಡಿದಾಗ ನೋಟು ಅಮಾನ್ಯೀಕರಣ ಒಂದು ಜನವೀರೋಧಿ ಕೆಲಸ ಎಂದು ಬಿಂಬಿಸಲು ಕಾಂಗ್ರೆಸ್ ಯೋಜನೆಯನ್ನು ಮಾಡುತ್ತಿದ್ದಾಗ ನೋಟು ಅಮಾನ್ಯೀಕರಣವನ್ನು ಗಟ್ಟಿ ಧ್ವನಿಯಲ್ಲಿ ಸಮರ್ಥಿಸಿಕೊಳ್ಳಲು ಬಿಜೆಪಿಯಲ್ಲೆ ಕೆಲವರು ಮೀನಾಮೇಷ ಎಣಿಸುತ್ತಿದ್ದಾಗಲೇ ಚಕ್ರವರ್ತಿ ಸೂಲಿಬೆಲೆಯವರು ರಾಜ್ಯಾದ್ಯಂತ ಸಂಚರಿಸಿ ಬಹಿರಂಗ ಸಮಾವೇಶಗಳನ್ನು ಮಾಡಿ ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಆಗುವ ಲಾಭವನ್ನು ತಿಳಿಸಲು ನೂರಾರು ಕಾರ್ಯಕ್ರಮಗಳನ್ನು ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಕುತಂತ್ರ ನೆಲಕಚ್ಚುವಂತೆ ಮಾಡಿದ್ದು ಇದೇ ಚಕ್ರವರ್ತಿ ಸೂಲಿಬೆಲೆ.

2018 ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಾಗ ಬಿಜೆಪಿ ಪಾಳಯದಲ್ಲಿ ಆತ್ಮಸ್ಥೈರ್ಯ ಅಲುಗಾಡುತ್ತಿದ್ದ ಸಂದರ್ಭದಲ್ಲಿ ಮೋದಿ ಮತ್ತೊಮ್ಮೆ ಎಂದು ಹ್ಞೂಂಕರಿಸಿ ರಾಜ್ಯಾದ್ಯಂತ ಏಕಕಾಲದಲ್ಲಿ 300 ಕ್ಕೂ ಹೆಚ್ಚು ಕಡೆಗಳಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಮೋದಿ‌ ಅಲೆ ಇನ್ನೂ ಇದೆ ಎಂದು ತೋರಿಸಿದರು. ಟೀಮ್ ಮೋದಿ ಸಂಘಟನೆಯನ್ನು ಉದ್ಘಾಟಿಸಿ ಇಲ್ಲೂ ಬಿಜೆಪಿ ಇಂದ ಅಂತರಕಾಯ್ದುಕೊಂಡೇ ಭಿನ್ನ-ಭಿನ್ನ ಕಾರ್ಯಕ್ರಮಗಳನ್ನು ರೂಪಿಸುತ್ತಾ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಐದು ವರ್ಷಗಳ ಕಾಲ ಮಾಡಿದ ಕೆಲಸವನ್ನು ಜನರಿಗೆ ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುವಕರನ್ನು ಮೋದಿಯತ್ತ ಸೆಳೆಯುತ್ತ, ಮೊತ್ತೊಂದು ಕಡೆ ನರೇಂದ್ರ ಮೋದಿಯವರ ಸಾಧನೆಯನ್ನು ಸಾರುವ ಎರಡು ರಥಗಳನ್ನು ಮಾಡಿ ರಾಜ್ಯಾದ್ಯಂತ 12 ಸಾವಿರ ಕಿಲೋಮಿಟರಗಳಷ್ಟು ರಥಯಾತ್ರೆ ಮಾಡಿ ಗ್ರಾಮ ಗ್ರಾಮ ತಲುಪಿಸಿ ಮೋದಿಯ ಸಾಧನೆ ವಿವರಿಸುವಂತೆ ಮಾಡಿದರು. ಚುನಾವಣೆ ಘೋಷಣೆ ಆಗುತ್ತಿದ್ದಂತೆ 27 ಲೋಕಸಭಾ ಕ್ಷೇತ್ರಗಳಲ್ಲಿ 110 ಕ್ಕೂ ಹೆಚ್ಚು ಕಡೆಗಳಲ್ಲಿ “ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು” ಎಂಬ ಬಹಿರಂಗ ಸಮಾವೇಶಗಳನ್ನು ಮಾಡುತ್ತ ನಾಡಿನ ಜನತೆಯಲ್ಲಿ ಮೋದಿಯ ಮೇಲೆ ಭಕ್ತಿ ಉದ್ದೀಪನವಾಗುವಂತೆ ಮಾಡಿ ಕರ್ನಾಟಕದಲ್ಲಿ ಮೋದಿಯ ನಂತರ ಸ್ಟಾರ್ ಪ್ರಚಾರಕ ಎಂದು ಗುರುತಿಸಿಕೊಂಡು, ಕರ್ನಾಟಕದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದರ ಉರಿಯಿಂದ ಕುದ್ದು ಕ್ರೋಧಗೊಂಡವರು ಕಾಂಗ್ರೆಸ್ ಮಾತ್ರವಲ್ಲ ಸಂಪೂರ್ಣ ಎಡಪಂಥೀಯ ಬಳಗ, ತುಕಡೆ ಗ್ಯಾಂಗ್, ಭಯೋತ್ಪಾದಕ ಸಂಘಟನೆಯ ಸಹಕಾರಕ್ಕೆ ನಿಂತ ಬುದ್ಧಿಜೀವಿಗಳು ಎಲ್ಲವೂ ಚಕ್ರವರ್ತಿ ಸೂಲಿಬೆಲೆಯವರ ಮೇಲೆ ವಿಷಕಾರಲು ಆರಂಭಿಸಿದವು.

ಕಾಂಗ್ರೆಸ್ ನ ಉರಿ ಕಡಿಮೆ ಆಗುವ ಮೊದಲೇ ನರೇಂದ್ರ ಮೋದಿ ಕಾಶ್ಮೀರದ ಆರ್ಟಿಕಲ್ 370 ರದ್ದು, ರಾಮ ಮಂದಿರ ನಿರ್ಮಾಣದ ಯೋಜನೆ, CAA ಕಾನೂನು ಅಂತ ಒಂದರ ಮೇಲೊಂದು ಬರೆ ಹಾಕುತ್ತಿದ್ದಂತೆ CAA ಯನ್ನು ಮುಸ್ಲಿಂ ವಿರೋಧಿ ಕಾನೂನು ಎಂದು ಬಿಂಬಿಸಿ ಬೀದಿಗಿಳಿದ ಕಾಂಗ್ರೆಸ್ ಹಾಗೂ ಎಡಪಂಥೀಯ ಬೀದಿನಾಟಕ ಮಂಡಳಿ ಸಾಮಾಜದಲ್ಲಿ ಶಾಂತಿಕದಡುವ ವಾತವರಣ ಸೃಷ್ಟಿಸಿ ಕರ್ನಾಟಕದಲ್ಲೂ ತನ್ನ ಕಪಟ ನಾಟಕ ಆರಂಭಿಸುತ್ತಿದ್ದಂತೆ ಇತ್ತ ಚಕ್ರವರ್ತಿ ಸೂಲಿಬೆಲೆ CAA ಪರವಾದ ಮಾತಗಳನ್ನಾಡುತ್ತ ರಾಷ್ಟ್ರೀಯ ಹಿತಾಸಕ್ತಿಗಾಗಿ CAA ಬೇಕೆಂದು CAA ಪರ ಅಭಿಯಾನಕ್ಕೆ ಧ್ವನಿಯಾದರು. ಟೌನ್ ಹಾಲ್ ಮುಂದೆ ನಡೆದ CAA ಪರವಾದ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗುತ್ತಿದ್ದಂತೆ ಹತ್ಯೆಯ ಪ್ರಯತ್ನವು ನಡೆಯಿತು. ದೈವ ಬಲದಿಂದ ಬಚಾವ್ ಆದ ಚಕ್ರವರ್ತಿ ಸೂಲಿಬೆಲೆಯವರ ರಕ್ಷಣೆಗೆ ಸರ್ಕಾರ ಶಸ್ತ್ರ ಸಜ್ಜಿತ ಪೋಲಿಸ್ ಇಲಾಖೆಯ ಅಂಗ ರಕ್ಷಕರನ್ನು ನೇಮಿಸಿ ಹತ್ಯೆಗೆ ಯತ್ನಿಸಿದವರನ್ನು ಹೆಡೆಮುರಿ ಕಟ್ಟುತ್ತಿದ್ದಂತೆ ವಿರೋಧಿಗಳು ಪಥ ಬದಲಿಸಿದರು.

ಕೊರೋನಾ ಮಹಾ ಮಾರಿಯಿಂದ ಬೀದಿ ನಾಟಕಗಳು ರದ್ದಾದ್ದರಿಂದ ಕೈ ಕೈ ಹಿಸುಕಿಕೊಳ್ಳುತ್ತಾ ಕಾಲಿ ಕೈಯಲ್ಲಿ ಕುಳಿತಿದ್ದ ಕಾಂಗ್ರೆಸಿಗರಿಗೆ ಕೆಲಸ ಕೊಟ್ಟವರು ಹೊಸದಾಗಿ ರಾಜ್ಯದ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಡಿಕೆಶಿ ಮತ್ತು ಸತೀಶ್ ಜಾರಕಿಹೋಳಿ. ಜಾಲತಾಣದಲ್ಲಿ ಚಕ್ರವರ್ತಿ ಸೂಲಿಬೆಲೆಯವರ ತೇಜೋವಧೆಗೆ ಕಾಂಗ್ರೆಸ್ ಐ ಟಿ ಸೆಲ್ ಅನ್ನು ಛೂ ಬಿಟ್ಟರು ಕಾಂಗ್ರೆಸ್ ಐ ಟಿ ಸೆಲ್ ಸಾಮರ್ಥ್ಯ ಅಷ್ಟು ತಾಖತ್ ಇಲ್ಲದ ಕಾರಣ ಚಕ್ರವರ್ತಿ ಸೂಲಿಬೆಲೆಯವರ ಹೆಸರಿನಲ್ಲಿ ಅವರದ್ದೇ ಪೋಟೋ ಬಳಸಿ ಫೇಕ್ ಫೇಸ್‌ಬುಕ್‌, ಟ್ವಿಟರ್ ಅಕೌಂಟ್ ತೆರೆದು ಸುಳ್ಳು ಹಬ್ಬಿಸಲು ಪ್ರಾರಂಭಿಸಿದರು, ಜೊತೆಗೆ ಟ್ರಾಲ್ ಪೇಜ್ ಗಳನ್ನು ಖರೀದಿಸಿ ತೇಜೋವಧೆಗೆಂದೆ ನಿಂತರು.

ಚಕ್ರವರ್ತಿ ಅವರ ತೋಜೋವದೆಗೆಂದು ಪೇಜ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಸ್ವತಃ ಜಾರಕಿಹೋಳಿ ಕರೆ ಮಾಡಿ ಶಭಾಷ್ ಗಿರಿ ಹೇಳಿದ್ದನ್ನು ಕಾರ್ಯಕರ್ತ ಬಲು ಸಂತೋಷದಿಂದಲೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅವರ ಯೋಜನೆಯನ್ನು ಬೆತ್ತಲು ಮಾಡಿಬಿಟ್ಟ. ಇದು ಕಾಂಗ್ರೆಸ್ ಕಾರ್ಯಕರ್ತನಿಗೆ ಜಾರಕಿಹೋಳಿ ಕಾಲ್ ಮಾಡಿ ಮಾತನಾಡಿರುವುದು ಆಳುವ ಪಕ್ಷದ ಮಂತ್ರಿ ಮಹೋದಯರನ್ನು ಬಿಟ್ಟು ಇವರನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಈಗಾಗಲೇ ತಿಳಿದಿದೆ. ಚಕ್ರವರ್ತಿ ಸೂಲಿಬೆಲೆ ಎಂದರೆ ಜಾತಿ-ಮತ-ಪಂಥಗಳನ್ನು ಬಿಟ್ಟು ಸ್ವತಃ ಹಣ ಖರ್ಚು ಮಾಡಿಕೊಂಡು ದೇಶಕ್ಕಾಗಿ ದುಡಿಯುವ ಯುವಕರ ದಂಡು ಬೀದರ್ ನಿಂದ ಚಾಮರಾಜನಗರದವರೆಗೂ ಇದೆ. ಯುವಕರನ್ನು, ಗೃಹಸ್ಥರನ್ನು ಸುಲಭವಾಗಿ ಸೆಳೆಯುವ ಚಕ್ರವರ್ತಿಯವರನ್ನು ದಮನ ಮಾಡದಿದ್ದರೆ ಮುಂದೆ ಮತ್ತೆ ಕಾಂಗ್ರೆಸ್ ಪಾಳಯಕ್ಕೆ ಬಲವಾದ ಹೊಡೆತ ಬೀಳುವುದು ಗ್ಯಾರಂಟಿ ಎಂದು ಎಣಿಸಿರುವ ಜೈಲು ಹಕ್ಕಿ ಜಾಲತಾಣದಲ್ಲಿ ಚಕ್ರವರ್ತಿ ಅವರ ತೇಜೋವಧೆಗೆ ಕುಮ್ಮಕ್ಕು ನೀಡುತ್ತಾ ಸತ್ಯವನ್ನು ಸುಳ್ಳಾಗಿಸಲು ಹೊರಟಿದೆ. ಆದರೆ ಅದೇ ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಸೂಲಿಬೆಲೆಯ ಅಭಿಮಾನಿಗಳು ಕಾಂಗ್ರೆಸ್ ಪ್ರಾಪಗ್ಯಾಂಡವನ್ನು ಸಾಕ್ಷಿಸಹಿತ ಬೆತ್ತಲುಗೊಳಿಸಿ, ಚಕ್ರವರ್ತಿಯವರು ಹೇಳಿದ್ದರಲ್ಲಿ ಸತ್ಯವಿದೆ ಎಂದು ಬಹಿರಂಗಪಡಿಸಿಬಿಟ್ಟಿತು.

ಕಾಂಗ್ರೆಸ್ ತನ್ನ ಹಾದಿಗೆ ಅಡ್ಡ ಬರುವವರನ್ನು ಹಣಿಯಲು ತಂತ್ರ-ಕುತಂತ್ರ ಮಾಡುವುದು ಇದೇ ಮೊದಲಲ್ಲ. ಕಾಂಗ್ರೆಸ್‌ಗೆ ಅಡ್ಡಗಾಲಗಿದ್ದ ಸುಭಾಷ್ ಚಂದ್ರ ಬೋಸ್ , ಪಂಡಿತ್ ದೀನದಯಾಳ್ ಉಪಾಧ್ಯಾಯ ಶಾಮ್ ಪ್ರಸಾದ್ ಮುಖರ್ಜಿ ಅವರನ್ನು ಏನು ಮಾಡಿದೆ ಎಂಬುದನ್ನು ನಾವು ಕಂಡಿದ್ದೆವೆ. ಕಾಂಗ್ರೆಸ್ ಆಡಳಿತದಲ್ಲಿರುವ ಮಂತ್ರಿ ಮಹೋದಯರನ್ನು ಬಿಟ್ಟು ಚಕ್ರವರ್ತಿ ಸೂಲಿಬೆಲೆಯವರನ್ನೆ ಟಾರ್ಗೆಟ್ ಮಾಡುತ್ತಿದೆ ಎಂದರೆ ಕಾಂಗ್ರೆಸ್,  ಚಕ್ರವರ್ತಿಯವರನ್ನು ಕಂಡು ಎಷ್ಟರಮಟ್ಟಿಗೆ ಹೆದರಿದೆ ಊಹಿಸಿಕೊಳ್ಳಿ.

ಮೂಲ ಲೇಖನ:
kadambakranti.com
July 12, 2020 08:29 AM

Link

Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಗುಜರಾತಿನಲ್ಲಿ ಆಸ್ಪತ್ರೆಗಳ ಮಾಹಿತಿ ನೋಡುವ ಮೋದಿ

ಯಾರಿದ್ದಾರೆ ಈ "ಹೆಂಗ್ ಪುಂಗ್ ಲೀ" ಪಿತೂರಿ ಹಿಂದೆ ?