Corona news: ಇಟಲಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಇಲ್ಲ!
ಕೈಗೆ ಸುತ್ತಿಗೆ ಸಿಕ್ಕಿದರೆ, ಎಲ್ಲವೂ ಮೊಳೆಯ ತಲೆಯಂತೆ ಕಾಣುತ್ತದಂತೆ! ಹಾಗೆ ಜಸ್ಟ್ ಒಬ್ಬ ಭಾಷಣಕಾರರನ್ನು ಜಿಹಾದಿಗಳು ಸುಳ್ಳೆಂದು ಬ್ರಾಂಡ್ ಮಾಡಲು ಹೆಣಗಾಡುತ್ತಿರುವಾಗ, ಸೂಲಿಬೆಲೆ ಹೇಳಿದ ಎಲ್ಲಾ ವಿಷಯಗಳನ್ನು ವಿಮರ್ಶಿಸದೆ ಚೆಕ್ ಮಾಡದೆ ಪಂಚರ್ ಶಾಪ್ ಜಿಹಾದಿಗಳ ಮಾತು ಕೇಳಿ ಜೋಕ್ ಎಂದು ಹೇಳುವುದು ನಿಮ್ಮ ವಿದ್ಯಾಭ್ಯಾಸಕ್ಕೆ ನೀವು ಮಾಡುವ ಅವಮಾನ. ಯಾವುದೋ ಒಂದು ಭಾಷಣದಲ್ಲಿ, ಸೂಲಿಬೆಲೆಯವರು ಎಲ್ಲರಿಗಿಂತಲೂ ಮೊದಲು ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಕರೋನಾ ರೋಗಕ್ಕೆ ಭೀಕರವಾಗಿ ಈಡಾದ ಇಟಲಿ ದೇಶದಲ್ಲಿ ಕೇಸ್ ಕೈ ಮೀರಿ ಹೋದಾಗ ಇಟಲಿ ಪ್ರಧಾನಿ ಹೇಳಿದ್ದು 80 ಮೀರಿದ ವೃದ್ಧರಿಗೆ ತೀವ್ರ ನಿಗಾ ಘಟಕ ಕೊಡೋದಿಕ್ಕೆ ಆಗುವುದಿಲ್ಲ ಅಷ್ಟೊಂದು ಸೌಲಭ್ಯ ಅವರಲ್ಲಿ ಇಲ್ಲ ಎಂದು ! ಎಲ್ಲಿ ? ಅತ್ಯಂತ ಮುಂದುವರಿದ ದೇಶ ಇಟಲಿಯಲ್ಲಿ! ಇವಾಗ ಕರ್ನಾಟಕದ ಪರಿಸ್ಥಿತಿ ನೋಡೋಣ: ಜುಲೈ 18ರಂದು ಕರ್ನಾಟಕದ ಲೀಡರ್ ಯಡಿಯೂರಪ್ಪ ಹೇಳುತ್ತಿದ್ದಾರೆ ನಮ್ಮಲ್ಲಿ ಹಿರಿಯರಿಗೆ ಮೊದಲ ಆದ್ಯತೆ ಎಂದು. ಹೇಗೆ?