ಆ ಕಡೆಯಿಂದ ಪೆಟ್ರೋಲ್, ಈ ಕಡೆಯಿಂದ ಪೈಪಿನಲ್ಲಿ ನೀರು!

 

ಪೈಪಿನಲ್ಲಿ ಆ ಕಡೆಯಿಂದ ಪೆಟ್ರೋಲ್, ಈ ಕಡೆಯಿಂದ ನೀರು!

ಸೂಲಿಬೆಲೆ ಒಂದು ಕಡೆ ಮಾತನಾಡುವಾಗ, ಮೋದಿ ಅವರ ಜೊತೆ ಒಳ್ಳೆಯ ಸಂಬಂಧ ಹೊಂದಿರುವ ಅರಬ್ ದೇಶ UAE ಅಲ್ಲಿಂದ ಮುಂಬೈ ತನಕ ಸಮುದ್ರದೊಳಗೆ ಪೈಪನ್ನು ಮಾಡಿ ಆಕಡೆಯಿಂದ ಪೆಟ್ರೋಲ್ ಕಳುಹಿಸುತ್ತಾರೆ, ಭಾರತದಿಂದ ನೀರನ್ನು ಖರೀದಿಸುತ್ತಾರೆ ಎಂದು ಹೇಳಿದ್ದರು. ಎಂದು ಒಂದು ಜೋಕ್ ನಡೆಯುತ್ತಿತ್ತು.  ಒಂದೇ ಒಂದು ಸಾರಿ ಗೂಗಲ್ ಮಾಡಿದರೆ ಸೂಲಿಬೆಲೆ ಹೇಳಿದ್ದು ಸತ್ಯ ಸುಳ್ಳು ಎಂದು ತಿಳಿದು ಬಿಡುತ್ತಿತ್ತೂ. ಅದಕ್ಕೆಲ್ಲ ತಲೆ ಬೇಕು ಬಿಡಿ. 
 
ಓಕೆ ಇವಾಗ ಸಮುದ್ರ ದಡಿಯ ಪೈಪಿನ ಬಗ್ಗೆ ವಿಮರ್ಶೆ ಮಾಡೋಣ. ಅರಬ್ ದೇಶಗಳು ಅತ್ಯಂತ ಚಾಲೆಂಜಿಂಗ್ ಆದ ಆರ್ಕಿಟೆಕ್ಚರ್ ಪ್ಲಾನ್ ನಿರ್ಮಿಸುವುದರಲ್ಲಿ ಎತ್ತಿದ ಕೈ. ಅದಕ್ಕೆ ಅವರು ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ನಿರ್ಮಿಸಿದ್ದಾರೆ. ಸಮುದ್ರದ ಮೇಲೆ ಕೃತಕ ದ್ವೀಪ ದ್ವೀಪ ಸೃಷ್ಟಿ ಒಂದು ಸಿಟಿ ಅನ್ನೇ ನಿರ್ಮಾಣ ಮಾಡಿದ್ದಾರೆ. ಇಲ್ಲಿ ನೋಡಿ: UAE ದೇಶದ ಕಂಪನಿಯೊಂದು ಸಮುದ್ರದ ಕೆಳಗೆ  ಭಾರತಕ್ಕೆ ಸುರಂಗ  ನಿರ್ಮಿಸಿ: ರೈಲ್ವೆ ಮಾರ್ಗ ಸೃಷ್ಟಿಸಲು ಪ್ಲಾನ್ ಮಾಡುತ್ತಿರುವುದು.
 

ಸುದ್ದಿಯ ಲಿಂಕ್: https://tinyurl.com/yxe4snwb
 

ಅದೇ ಸುರಂಗ ದ್ವಾರದ ಮೂಲಕ, ಅಲ್ಲಿಂದ ತೈಲ ಮತ್ತು ಗ್ಯಾಸ್ ಭಾರತಕ್ಕೆ ತಲುಪಿಸುವುದು, ಮತ್ತು ಭಾರತದಿಂದ ನರ್ಮದಾ ನದಿಯ ನೀರನ್ನು ಅರಬ್ ದೇಶಕ್ಕೆ ಸಪ್ಲೈ ಮಾಡುವುದು. ಇದೆಲ್ಲ ಪ್ಲಾನ್ ಗಳನ್ನು ಮಾಡಿಕೊಂಡಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಹೇಗೆಂದರೆ ಮೋದಿ ಮತ್ತು ಅರಬ್ ದೇಶಗಳ ಮಧ್ಯೆ ಇರುವ ಮೊದಲ ಬಾಂಧವ್ಯದಿಂದ!


ಸುದ್ದಿಯ ಲಿಂಕ್: https://tinyurl.com/yxe4snwb

Popular posts from this blog

ಚಕ್ರವರ್ತಿ ಸೂಲಿಬೆಲೆ ಹೇಳಿದ 28 ಸತ್ಯಗಳು ನಿಜವೇ?

ಗುಜರಾತಿನಲ್ಲಿ ಆಸ್ಪತ್ರೆಗಳ ಮಾಹಿತಿ ನೋಡುವ ಮೋದಿ

ಯಾರಿದ್ದಾರೆ ಈ "ಹೆಂಗ್ ಪುಂಗ್ ಲೀ" ಪಿತೂರಿ ಹಿಂದೆ ?